Sunday, March 29, 2015

ಗಸ ಗಸೆ ಪಾಯಸ

 :
ಬೇಕಾಗುವ ಪದಾರ್ಥಗಳು :  ೪ ಚಮಚ ಗಸಗಸೆ , ೮ ಚಮಚ ಸಕ್ಕರೆ, ೩ ಚಮಚ ಅಕ್ಕಿ , ಒಂದು ಬಟ್ಟಲು ಕಾಯಿ ತುರಿ, ಎರಡು ಏಲಕ್ಕಿ , ಬಾದಾಮಿ ತುರಿ , ೮ ಕಾಳು ಗೋಡಂಬಿ, ೮ ಕಾಳು ದ್ರಾಕ್ಷಿ, ೪ ಚಮಚ ತುಪ್ಪ ಮತ್ತು ಒಂದು ಬಟ್ಟಲು ಹಾಲು.
ಮಾಡುವ ವಿಧಾನ :  ಒಂದು ಬಾಣಲೆಯಲ್ಲಿ ಗಸಗಸೆ ಮತ್ತು ಅಕ್ಕಿಯನ್ನು ಬೇರೆ ಬೇರೆ ಹುರಿದು, ಸಕ್ಕರೆ ಜೊತೆ ಸೇರಿಸಿ ಸಾಮಾನ್ಯ ತರಿ ತರಿಯಾಗಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಇದಕ್ಕೆ ಕಾಯಿ ತುರಿ ಸೇರಿಸಿ ಸ್ವಲ್ಪ ನೀರು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.  ಹಾಲನ್ನು ಒಲೆ ಮೇಲಿಟ್ಟು ಕುದಿ ಬರಿಸಿ ಸ್ವಲ್ಪ ದಪ್ಪವಾಗುತ್ತಿದ್ದಂತೆ, ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಕುದಿಸಬೇಕು.  ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿಯನ್ನು ತುಪ್ಪದಲ್ಲಿ ಹುರಿದು ಹಾಕಿ.

ಗೋಧಿ ಕಡಿ ಪಾಯಸ:
ಬೇಕಾಗುವ ಪದಾರ್ಥಗಳು : ೧ ತಟ್ಟೆ ಗೋಧಿ ತರಿ, ೧ ೧/೨ ತಟ್ಟೆ ಬೆಲ್ಲ, ೨ ತಟ್ಟೆ ಹಾಲು, ೧ ತಟ್ಟೆ ಕಾಯಿ ತುರಿ , ೨ ಚಮಚ ಗಸಗಸೆ ದ್ರಾಕ್ಷಿ, ಗೋಡಂಬಿ ಹಾಗೂ ತುಪ್ಪ.
ಮಾಡುವ ವಿಧಾನ : ಗೋಧಿ ತರಿಯನ್ನು ೫ ನಿಮಿಷ ನೀರಿನಲ್ಲಿ ನೆನೆ ಹಾಕಿ ಕುಕ್ಕರಿನಲ್ಲಿ ೪ ಸೀಟಿ ಕೂಗಿಸಿ ಬೇಯಿಸಬೇಕು.  ಒಲೆ ಮೇಲೆ ಸಣ್ಣ ಉರಿಯಲ್ಲಿ ಹಾಲು ಕುದಿಯಲು ಇಟ್ಟು ಅದಕ್ಕೆ ಬೇಯಿಸಿದ ಗೋಧಿ ತರಿ ಸೇರಿಸಿ ಕುದಿಯಲು ಬಿಡಿ.  ಕೊಬ್ಬರಿ, ಹುರಿದ ಗಸಗಸೆ ಮತ್ತು ಏಲಕ್ಕಿಯ ಮಿಶ್ರಣವನ್ನು ರುಬ್ಬಿ ಕುದಿಯುತ್ತಿರುವ ಗೋಧಿ ಮತ್ತು ಹಾಲಿನ ಮಿಶ್ರಣಕ್ಕೆ ಸೇರಿಸಿ  ನಿಮಿಷ ಕುದಿಸಿ.  ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿಯನ್ನು ತುಪ್ಪದಲ್ಲಿ ಹುರಿದು ಹಾಕಿ.
Courtesy:  Raaji Athe

No comments: