ಬೇಕಾಗುವ ಸಾಮಗ್ರಿಗಳು :
ಕೆಸುವಿನ ಎಲೆ -- ೧೦ - ೧೫
ಅಂಬಟೆ ಕಾಯಿ -- ೬ - ೭
ಕಾಯಿ ತುರಿ -- ಒಂದು ಕಪ್
ಕೊತ್ತಂಬರಿ -- ೩ ಟೀ ಚಮಚ
ಕುಂಟೆ ಮೆಣಸು -- ೬ - ೭
ಸುಲಿದ ಬೆಳ್ಳುಳ್ಳಿ -- ೮ -- ೧೦
ಮಾಡುವ ವಿಧಾನ :
ಕೆಸುವಿನ ಎಲೆಗಳನ್ನು ಬತ್ತಿಯಂತೆ ಸುರುಳಿ ಸುತ್ತಿ ಗಂಟು ಹಾಕಿಕೊಳ್ಳಿ . ಅಂಬಟೆ ಕಾಯಿ ಗಳನ್ನು ಜಜ್ಜಿ ಬದಿಗೆ ಇಟ್ಟುಕೊಳ್ಳಿ . ಅಂಬಟೆ ಕಾಯಿ ಇಲ್ಲದ ಪಕ್ಷದಲ್ಲಿ ಸುಲಿದ ಸಣ್ಣ ಅಡಿಕೆಯಷ್ಟು ಹುಣಸೆಹಣ್ಣು ನೆನೆ ಹಾಕಿ ಬದಿಗೆ ಇಡಿ.
ತುರಿದ ಕಾಯಿ, ಹುರಿದ ಕುಂಟೆ ಮೆಣಸು ಮತ್ತು ಹುರಿಯದ ಕೊತ್ತಂಬರಿಯನ್ನು ಸೇರಿಸಿ ತರಿ ತರಿಯಾಗಿ ಕಡಿದು ಇಟ್ಟುಕೊಳ್ಳಿ.
ಸಣ್ಣ ಬೆಂಕಿಯ ಮೇಲೆ ಒಂದು ಬಾಣಲೆಯಿಟ್ಟು ಅದಕ್ಕೆ ಸುಲಿದಿಟ್ಟ ಹಸಿ ಬೆಳ್ಳುಳ್ಳಿ, ಸುರುಳಿ ಸುತ್ತಿ ಗಂಟು ಹಾಕಿಟ್ಟ ಕೆಸುವಿನ ಎಲೆ, ಜಜ್ಜಿದ ಅಂಬಟೆ ಕಾಯಿ ಹಾಕಿ. ಅದರ ಮೇಲೆ ಕಡಿದಿಟ್ಟ ಮಿಶ್ರಣ ಹಾಕಿ ಅದರ ಮೇಲೆ ಮಿಕ್ಸಿ (ಯಾ ಕಲ್ಲು) ತೊಳೆದ ನೀರು ಸುರಿಯಿರಿ. ಅದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎರಡು ಚಮಚ ತೆಂಗಿನ ಎಣ್ಣೆ ಹಾಕಿ ಬಾಣಲೆಯನ್ನು ಮುಚ್ಚಿಡಿ . ಎರಡು ನಿಮಿಷದ ನಂತರ ಎಲ್ಲವನ್ನು ಒಂದು ಸಾರಿ ಜಾಗ್ರತೆಯಿಂದ ತಿರುವಿ ಹಾಕಿ. ಎಲ್ಲವೂ ಸರಿಯಾಗಿ ಬೆಂದ ಮೇಲೆ ಬೆಂಕಿ ನಂದಿಸಿ ಅನ್ನ ಅಥವಾ ಚಪಾತಿಯೊಟ್ಟಿಗೆ ಸವಿಯಿರಿ.

No comments:
Post a Comment